Key Dates/ ಪ್ರಮುಖ ದಿನಾಂಕಗಳು

SL.NO
ಕ್ರಮ ಸಂಖ್ಯೆ
DESCRIPTION
ವಿವರ
DATES
ದಿನಾಂಕ
01Date of Commencement of Online Application
ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ
24-06-2024
02Last Date of Online Application Generation
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೇಯ ದಿನಾಂಕ
07-07-2024 

ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET) ಮುಖಾಂತರ ಎಂ.ಬಿ.ಬಿ.ಎಸ್/ ಬಿ.ಡಿ.ಎಸ್/ಬಿ ಆಯುಷ್/ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್/ಬ್ಯಾಚುಲರ್ ಆಫ್ ಇಂಜಿನಿಯರಿಂಗ್/ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್ ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಾಲವನ್ನು ನೀಡಲಾಗುತ್ತದೆ.

ಅರ್ಹತೆ

1.ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET) ಮುಖಾಂತರ ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್ ಕೋರ್ಸ್ ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 5,00,000/- ವನ್ನು ನೀಡಲಾಗುತ್ತದೆ.
2.ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ./ನೀಟ್) ಮುಖಾಂತರ ಆಯ್ಕೆಯಾದ ಬಿ. ಡಿ. ಎಸ್, ಎಂ.ಡಿ.ಎಸ್ ಕೋರ್ಸುಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ 1,00,000 ವರೆಗೆ ಮತ್ತು ಬಿ.ಆಯುಷ್ ಮತ್ತು ಎಂ.ಆಯುಷ್ ಕೋರ್ಸ್ ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 50,000 ಗಳನ್ನು ಬಿಡುಗಡೆ ಮಾಡುವುದು.
3. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ./ನೀಟ್) ಮುಖಾಂತರ ಆಯ್ಕೆಯಾದ ಬ್ಯಾಚುಲಾರ್ ಆಫ್ ಆರ್ಕಿಟೆಕ್ಟ/ಇಂಜಿನಿಯರಿಂಗ್/ಟೆಕ್ನಾಲಜಿ (ಬಿ.ಇ./ಬಿ.ಟೆಕ್), ಎಂ.ಟೆಕ್, ಎಂ.ಇ. ಬಿ.ಆರ್ಕ್. ಎಂ.ಆರ್ಕ್ ವ್ಯಾಸಾಂಗ ಮಾಡುತ್ತಿರುವ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ 50,000 ಗಳನ್ನು ಬಿಡುಗಡೆ ಮಾಡುವುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET) ಮುಖಾಂತರ ಎಂ ಬಿ ಎ, ಎಂ ಸಿ ಎ, ಎಲ್ ಎಲ್ ಬಿ ಕೋರ್ಸಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಠ ರೂ.50,000/-ಗಳನ್ನು ಸಾಲವಾಗಿ ನೀಡಲಾಗುವುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಮುಖಾಂತರ ಆಯ್ಕೆಯಾದ B.Sc. in Horticulture, Agriculture, Dairy Technology, Forestry, Veterinary, Animal science, Food Technology, Bio Technology, Fisheries, Sericulture, Home/community Sciences, Food Nutrition and Dietetics, ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಟ ರೂ.50,000/-ಗಳು ಸಾಲವಾಗಿ ನೀಡಲಾಗುವುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಮುಖಾಂತರ ಆಯ್ಕೆಯಾದ B.Pharma, M.Pharma, Pharma.D,and D.Pharma, ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಟ ರೂ.50,000/-ಗಳು ಸಾಲವಾಗಿ ನೀಡಲಾಗುವುದು.
ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂ. 8,00,000/- ಗಿಂತ ಕಡಿಮೆ ಇರಬೇಕು.. ವಿದ್ಯಾರ್ಥಿಯು ಪಡೆದ ಸಾಲವನ್ನು ಕೋರ್ಸ್ ಮುಗಿದ 1 ವರ್ಷದ ನಂತರ 48 ತಿಂಗಳ ಅವಧಿಯಲ್ಲಿ 2% ಬಡ್ಡಿದರದೊಂದಿಗೆ ಮರುಪಾವತಿ ಮಾಡಬೇಕು.

ಪ್ರಮುಖ ಲಿಂಕ್‌ಗಳು / Important Links

Apply Online / ಆನ್‌ಲೈನ್‌ ಅರ್ಜಿ ಸಲ್ಲಿಸಿClick Here/ಇಲ್ಲಿ ಕ್ಲಿಕ್‌ ಮಾಡಿ
Notification/ಅಧಿಸೂಚನೆClick Here/ಇಲ್ಲಿ ಕ್ಲಿಕ್‌ ಮಾಡಿ
Official Website / ಅಧಿಕೃತ ವೆಬ್‌ಸೈಟ್Click Here/ಇಲ್ಲಿ ಕ್ಲಿಕ್‌ ಮಾಡಿ

ಬೇಕಾಗುವ ದಾಖಲೆಗಳು / Required Documents

Documents related to as mentioned in the notification
ಬೊನಾಫೈಡ್/ಅಧ್ಯಯನ ಪ್ರಮಾಣಪತ್ರ, ಕಾಲೇಜು ಶುಲ್ಕದ ವಿವರ, ಹಿಂದಿನ ವರ್ಷ ಪಾಸಾದ ಅಂಕಪಟ್ಟಿ, ಕಾಲೇಜು ಬ್ಯಾಂಕ್ ವಿವರಗಳು, ಭದ್ರತಾ ಠೇವಣಿ (ಸಾಲದ ಮೊತ್ತದ 12%) ಪಾವತಿ ಮಾಡಿದ ರಶೀದಿ, KEA ದಾಖಲಾತಿ ಆದೇಶ ಪ್ರತಿ, ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ, ಇಂಡೆಮ್ನಿಟೀ (ನಷ್ಟ ಪರಿಹಾರ) ಬಾಂಡ್, ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ, ಪೋಷಕರ ಸ್ವಯಂ ಘೋಷಣೆ ಪತ್ರ