What is the Cast certificate ?
ಜಾತಿ ಪ್ರಮಾಣಪತ್ರ ಅಂದರೆ ಏನು?

ಒಬ್ಬ ವ್ಯಕ್ತಿಯು ಸರ್ಕಾರದಿಂದ ಸಿಗುವ ಪ್ರಯೋಜನಗಳನ್ನು ಪಡೆಯಲು ತನ್ನ ಬಳಿ ಇರುವ ದಾಖಲಾತಿಗಳ ಪ್ರಕಾರ ತನ್ನ ಜಾತಿಯನ್ನು ದೃಡೀಕರಿಸಲು ಕಂದಾಯ ಇಲಾಖೆಯ ತಹಸಿಲ್ದಾರರಿಗೆ ಆನಲೈನ್‌ ಮೂಲಕ ಅರ್ಜಿ ಸಲ್ಲಿಸಿ QR Code ಮತ್ತು RD ನಂಬರ್ ಹೊಂದಿರುವ‌ ಪ್ರಮಾಣ ಪತ್ರವನ್ನು ಪಡೆಯುವುದಾಗಿದೆ.

What are the benefits of Cast certificate ?
ಜಾತಿ ಪ್ರಮಾಣ ಪತ್ರದಿಂದಾಗುವ ಉಪಯೋಗಗಳು ಏನು?

  • ಬ್ಯಾಂಕುಗಳಲ್ಲಿ ಈ ಪ್ರಮಾಣ ಪತ್ರ ಉಪಯೋಗವಾಗಬಹುದು.
  • ಜಮೀನು ಖರೀದಿಸುವಾಗ ಈ ಪ್ರಮಾಣ ಪತ್ರ ಉಪಯೋಗವಾಗುತ್ತದೆ.
  • ಕೆಲವು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಉಪಯೋಗವಾಗುತ್ತದೆ.
  • ತನ್ನ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಈ ಪ್ರಮಾಣ ಪತ್ರ ಕೇಳಲಾಗುತ್ತದೆ.
  • ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸುವಾಗ ಉಪಯೋಗವಾಗುತ್ತದೆ.
  • ಸಾಮಾನ್ಯವಾಗಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಜಾತಿ ಪ್ರಮಾಣ ಪತ್ರವನ್ನು ಕೇಳುವುದು ಸಾಧಾರಣ ಪ್ರಕ್ರಿಯೆಯಾಗಿದೆ.

ಹೆಚ್ಚಿನ ಮಾಹಿತಿ : ಯಾವುದೇ ರೀತಿಯ ಹಣವನ್ನು ಹೂಡಿಕೆ ಮಾಡದೇ ಮನೆಯಲ್ಲಿಯೇ ಕೂತು ತಮ್ಮ ಮೊಬೈಲ್‌ ಮೂಲಕ ಪಾರ್ಟ್‌ ಟೈಮ್‌ ಕೆಲಸಗಳನ್ನು ಮಾಡಲು ಈ ಲಿಂಕನ್ನು ಕ್ಲಿಕ್‌ ಮಾಡಿ.

Which documents are required for Cast certificate ?
ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?

  • ಆಧಾರ ಕಾರ್ಡ್
  • ಟಿ.ಸಿ ಅಥವಾ ಶಾಲಾ ದಾಖಲಾತಿ ಪ್ರಮಾಣ ಪತ್ರ
  • ಪಡಿತರ ಚೀಟಿ
  • ಫೋಟೊ
  • ಸ್ವಯಂಘೋಷಣಾ ಪತ್ರ
  • ವಂಶವೃಕ್ಷ (optional)
  • Payment Slip (Optional)
  • ಹಳೆಯ ಜಾತಿ ಪ್ರಮಾಣ ಪತ್ರ (Optional)

ಗಮನಿಸಿ : ದಾಖಲೆಗಳನ್ನು ತಮ್ಮ ವಿಳಾಸಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದಂತೆ ನೀಡಬೇಕು.

ವಿಶೇಷ ಸೂಚನೆಗಳು :
1. ಹೊಸದಾಗಿ ಮದುವೆಯಾದ ಹುಡುಗಿಯು ತನ್ನ ಗಂಡನ ಮನೆಯ ಪಡಿತರ ಚೀಟಿ ನೀಡಬೇಕಾಗುತ್ತದೆ.
2. ಹೊಸದಾಗಿ ಮದುವೆಯಾದ ಹುಡುಗಿಯು ತನ್ನ ಗಂಡನ ಆಧಾರ ಕಾರ್ಡ್ ನೀಡಬೇಕಾಗುತ್ತದೆ.
3.‌ ಶಾಲೆಗೆ ಹೋಗದ ಮಕ್ಕಳಿಗೆ ಜಾತಿಯ ದಾಖಲೆಯಾಗಿ ತಂದೆಯ ಟಿ.ಸಿ. ಅಥವಾ ಶಾಲಾ ದಾಖಲಾತಿ ಪ್ರಮಾಣ ಪತ್ರ ನೀಡಬೇಕು.
4. ಟಿ.ಸಿ. ಅಥವಾ ಶಾಲಾ ದಾಖಲಾತಿ ಪ್ರಮಾಣ ಪತ್ರದಲ್ಲಿ ಇರುವ ಜಾತಿಯನ್ನೆ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವಾಗ ನೀಡಬೇಕು.
5. ಶಾಲೆಗೆ ಹೋಗದ ವ್ಯಕ್ತಿಗಳು ತನ್ನ ತಂದೆಗೆ ಸಂಬಂಧಪಟ್ಟ ವಂಶವೃಕ್ಷದ ಯಾರಾದರು ಒಬ್ಬರ ಟಿ.ಸಿ. ಯನ್ನು ನೀಡಬಹುದು. ಅದರ ಜೊತೆಗೆ ಟಿ.ಸಿ. ನೀಡಿದವರು ಮತ್ತು ಅರ್ಜಿದಾರರ ನಡುವಿನ ಸಂಬಂಧದ ವಂಶವೃಕ್ಷವನ್ನು ನೀಡಬೇಕು ಆದರೆ ಇಬ್ಬರೂ ಒಂದೇ ಊರಿನಲ್ಲಿ ವಾಸಿಸುತ್ತಿದ್ದರೆ ವಂಶವೃಕ್ಷ ನೀಡುವ ಅವಶ್ಯಕತೆ ಇರುವುದಿಲ್ಲ.
6. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಕ್ಕೆ ಸ್ವಯಂಘೋಷಣಾ ಪ್ರಮಾಣ ಪತ್ರವನ್ನು 100 ಬಾಂಡ್‌ ಮೇಲೆ ನೋಟರಿ ಮಾಡಿ ನೀಡಬೇಕು.
7. ಮೊದಲು ವಾಸಿಸುತ್ತಿದ್ದ ವಿಳಾಸದ ಜಿಲ್ಲೆಯು ಬೇರೆಯಾಗಿದ್ದರೆ ಅಲ್ಲಿ ಪಡೆದ ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
8. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವಾಗ ತಮ್ಮ ಹಳೆಯ ಜಾತಿ ಪ್ರಮಾಣ ಪತ್ರ ಲಭ್ಯವಿದ್ದಲ್ಲಿ ನೀಡಬೇಕು.
9. ಈ ಮೇಲಿನ ಸೂಚನೆಗಳನ್ನು ಹೊರತುಪಡಿಸಿ ಇನ್ನಿತರೆ ವಿವರಗಳನ್ನು ಸಹ ಪರಿಶೀಲನಾ ಅಧಿಕಾರಿಗಳು ಕೇಳಿದರೆ ನೀಡಬೇಕಾಗುತ್ತದೆ.

ಪ್ರಮಾಣ ಪತ್ರ ವಿತರಿಸಲು ಬೇಕಾಗುವ ಗರಿಷ್ಟ ಸಮಯಗಳು : 21 ಸರ್ಕಾರಿ ಕೆಲಸದ ದಿನಗಳು

ಹೆಚ್ಚಿನ ಮಾಹಿತಿ : ಉದ್ಯೋಗ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅರ್ಜಿಯ ಪ್ರಕ್ರಿಯೆಗಳು:

  • ಅರ್ಜಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಬೇಕು
  • ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅರ್ಜಿ ಸಲ್ಲಿಸಿದ ನಂತರ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡುವುದು ಉತ್ತಮವಾಗಿರುತ್ತದೆ.
  • ನಂತರ ಸಂಬಂಧಪಟ್ಟ ಅಧಿಕಾರಿಗಳು ಈ ಅರ್ಜಿಯನ್ನು ಪರಿಶಿಲಿಸಿ ಆನ್‌ಲೈನ್‌ ಮೂಲಕ ಅನುಮೋದಿಸುವರು.
  • ನಂತರ ಪ್ರಮಾಣಪತ್ರವನ್ನು ಆನ್‌ಲೈನ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಅರ್ಜಿಸಲ್ಲಿಸುವ ಲಿಂಕ್‌ : ಲಿಂಕ್‌ – 1 , ಲಿಂಕ್‌ – 2 , ಲಿಂಕ್‌ – 3

ಅರ್ಜಿ ಸಲ್ಲಿಸುವ ವಿಧಾನ