What is the EWS certificate ?
EWS ಪ್ರಮಾಣಪತ್ರ ಅಂದರೆ ಏನು?

ಒಬ್ಬ ವ್ಯಕ್ತಿಯು ತನ್ನ ಜಾತಿಯು ಸಾಮಾನ್ಯ ವರ್ಗದಲ್ಲಿ ಬಂದರೂ ತಾನು ಆರ್ಥಿಕವಾಗಿ ಹಿಂದುಳಿದಿರುವೆನು ಎಂದು ದೃಡೀಕರಿಸಲು ಕಂದಾಯ ಇಲಾಖೆಯ ತಹಸಿಲ್ದಾರರಿಗೆ ಆನಲೈನ್‌ ಮೂಲಕ ಅರ್ಜಿ ಸಲ್ಲಿಸಿ QR Code ಮತ್ತು RD ನಂಬರ್ ಹೊಂದಿರುವ‌ ಪ್ರಮಾಣ ಪತ್ರವನ್ನು ಪಡೆಯುವುದಾಗಿದೆ.

What are the benefits of EWS certificate ?
EWS ಪ್ರಮಾಣ ಪತ್ರದಿಂದಾಗುವ ಉಪಯೋಗಗಳು ಏನು?

  • ಈ ಪ್ರಮಾಣ ಪತ್ರವನ್ನು ಒಂದು ಆರ್ಥಿಕ ವರ್ಷದವರೆಗೆ ಉಪಯೋಗಿಸಬಹುದು.
  • ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ಪ್ರಮಾಣ ಪತ್ರವನ್ನು ಹೊಂದಿದವರಿಗೆ ಮೀಸಲಾತಿ ಇಡಲಾಗುತ್ತದೆ.
  • ಕೆಲವು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಉಪಯೋಗ ವಾಗುತ್ತದೆ.

ಹೆಚ್ಚಿನ ಮಾಹಿತಿ : ಯಾವುದೇ ರೀತಿಯ ಹಣವನ್ನು ಹೂಡಿಕೆ ಮಾಡದೇ ಮನೆಯಲ್ಲಿಯೇ ಕೂತು ತಮ್ಮ ಮೊಬೈಲ್‌ ಮೂಲಕ ಪಾರ್ಟ್‌ ಟೈಮ್‌ ಕೆಲಸಗಳನ್ನು ಮಾಡಲು ಈ ಲಿಂಕನ್ನು ಕ್ಲಿಕ್‌ ಮಾಡಿ.

Which documents are required for EWS certificate ?
EWS ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?

  • ಆಧಾರ ಕಾರ್ಡ್
  • ಪಾನ್‌ ಕಾರ್ಡ್
  • ಟಿ.ಸಿ.
  • ವೋಟಿಂಗ್‌ ಕಾರ್ಡ್
  • ಜಾತಿ ಆದಾಯ ಪ್ರಮಾಣ ಪತ್ರ‌
  • ಪಂಚನಾಮೆ
  • RTC
  • ಪಡಿತರ ಚೀಟಿ
  • 1 ಪಾಸ್‌ ಪೋರ್ಟ್‌ ಸೈಜ್ ಫೋಟೊ
  • ಮನೆ ಸುತ್ತಳತೆ ಪತ್ರ
  • ವಂಶವೃಕ್ಷ
  • ಕೈಬರಹದ ಹಿಡುವಳಿ (ಅದರ ಮೇಲೆ ತಾಲೂಕಿನ ಎಲ್ಲಾ ಕಂದಾಯ ನರೀಕ್ಷಕರ ಸಹಿ ಇರಬೇಕು.)
  • ಬಾಂಡ್‌ ಟೈಪಿಂಗ್‌ ನೋಟರಿ ಮಾಡಿ ನೀಡಬೇಕು (Format)

ಗಮನಿಸಿ : ದಾಖಲೆಗಳನ್ನು ತಮ್ಮ ವಿಳಾಸಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದಂತೆ ನೀಡಬೇಕು.

ಪ್ರಮಾಣ ಪತ್ರ ವಿತರಿಸಲು ಬೇಕಾಗುವ ಗರಿಷ್ಟ ಸಮಯಗಳು : 15 ದಿನಗಳು

ಹೆಚ್ಚಿನ ಮಾಹಿತಿ : ಉದ್ಯೋಗ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅರ್ಜಿಯ ಪ್ರಕ್ರಿಯೆಗಳು:

  • ಅರ್ಜಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಬೇಕು
  • ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅರ್ಜಿ ಸಲ್ಲಿಸಿದ ನಂತರ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡುವುದು ಉತ್ತಮವಾಗಿರುತ್ತದೆ.
  • ನಂತರ ಸಂಬಂಧಪಟ್ಟ ಅಧಿಕಾರಿಗಳು ಈ ಅರ್ಜಿಯನ್ನು ಪರಿಶಿಲಿಸಿ ಆನ್‌ಲೈನ್‌ ಮೂಲಕ ಅನುಮೋದಿಸುವರು.
  • ನಂತರ ಪ್ರಮಾಣಪತ್ರವನ್ನು ಆನ್‌ಲೈನ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಅರ್ಜಿಸಲ್ಲಿಸುವ ಲಿಂಕ್‌ : ಲಿಂಕ್‌ – 1 , ಲಿಂಕ್‌ – 2 , ಲಿಂಕ್‌ – 3

ಅರ್ಜಿ ಸಲ್ಲಿಸುವ ವಿಧಾನ