What is the Mratara kutumba sadasyara dradhikarana certificate ?
ಮೃತರ ಕುಟುಂಬ ಸದಸ್ಯರ ದೃಢೀಕರಣ ಪ್ರಮಾಣಪತ್ರ ಅಂದರೆ ಏನು?
ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಮರಣ ಹೊಂದಿದಾಗ ಅವನಿಗೆ ಸಂಬಂಧಿಸಿದಂತೆ ಕುಟುಂಬದಲ್ಲಿ ಜೀವಂತ ಇರುವ ಇತರ ಸದಸ್ಯರುಗಳ ವಿವರಗಳನ್ನು ಖಚಿತಪಡಿಸಲು ಕಂದಾಯ ಇಲಾಖೆಯ ತಹಸಿಲ್ದಾರರಿಗೆ ಆನಲೈನ್ ಮೂಲಕ ಅರ್ಜಿ ಸಲ್ಲಿಸಿ QR Code ಮತ್ತು RD ನಂಬರ್ ಹೊಂದಿರುವ ಪ್ರಮಾಣ ಪತ್ರವನ್ನು ಪಡೆಯುವುದಾಗಿದೆ.
What are the benefits of Mratara kutumba sadasyara dradhikarana certificate ?
ಮೃತರ ಕುಟುಂಬ ಸದಸ್ಯರ ದೃಢೀಕರಣ ಪ್ರಮಾಣ ಪತ್ರದಿಂದಾಗುವ ಉಪಯೋಗಗಳು ಏನು?
- ಮೃತನ ಹೆಸರಿನಲ್ಲಿ ಇರುವ ಬ್ಯಾಂಕ್ ಖಾತೆಯಲ್ಲಿನ ಹಣ ಅಥವಾ ಬಂಗಾರಗಳನ್ನು ಕುಟುಂಬದ ಇತರೆ ಸದಸ್ಯರು ತಗೆಯಲು ಬ್ಯಾಂಕುಗಳಿಗೆ ಈ ಪ್ರಮಾಣ ಪತ್ರ ನೀಡಬೇಕಾಗುತ್ತದೆ.
- ಕೆಲವು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಉಪಯೋಗವಾಗುತ್ತದೆ.
Which documents are required for Mratara kutumba sadasyara dradhikarana certificate ?
ಮೃತರ ಕುಟುಂಬ ಸದಸ್ಯರ ದೃಢೀಕರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?
- ಕುಟುಂಬದ ಜೀವಂತ ಎಲ್ಲಾ ಸದಸ್ಯರ ಆಧಾರ ಕಾರ್ಡ್
- ಅರ್ಜಿದಾರನ ಹೆಸರಿನಲ್ಲಿ ಪ್ರಮಾಣ ಪತ್ರ (100rs Bond paper) (Formet)
- ಮೃತರ ಮರಣ ಪ್ರಮಾಣ ಪತ್ರ
- ವಂಶವೃಕ್ಷ
ಗಮನಿಸಿ : ದಾಖಲೆಗಳನ್ನು ತಮ್ಮ ವಿಳಾಸಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದಂತೆ ನೀಡಬೇಕು.
ಪ್ರಮಾಣ ಪತ್ರ ವಿತರಿಸಲು ಬೇಕಾಗುವ ಗರಿಷ್ಟ ಸಮಯಗಳು : 15 ಸರ್ಕಾರಿ ಕೆಲಸದ ದಿನಗಳು
ಹೆಚ್ಚಿನ ಮಾಹಿತಿ : ಉದ್ಯೋಗ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೃತರ ಕುಟುಂಬ ಸದಸ್ಯರ ದೃಢೀಕರಣ ಪ್ರಮಾಣ ಪತ್ರದ ಅರ್ಜಿಯ ಪ್ರಕ್ರಿಯೆಗಳು:
- ಅರ್ಜಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಬೇಕು
- ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸಿದ ನಂತರ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡುವುದು ಉತ್ತಮವಾಗಿರುತ್ತದೆ.
- ನಂತರ ಸಂಬಂಧಪಟ್ಟ ಅಧಿಕಾರಿಗಳು ಈ ಅರ್ಜಿಯನ್ನು ಪರಿಶಿಲಿಸಿ ಆನ್ಲೈನ್ ಮೂಲಕ ಅನುಮೋದಿಸುವರು.
- ನಂತರ ಪ್ರಮಾಣಪತ್ರವನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಅರ್ಜಿಸಲ್ಲಿಸುವ ಲಿಂಕ್ : ಲಿಂಕ್ – 1 , ಲಿಂಕ್ – 2 , ಲಿಂಕ್ – 3
ಅರ್ಜಿ ಸಲ್ಲಿಸುವ ವಿಧಾನ