What is the OBC certificate ?
OBC ಪ್ರಮಾಣಪತ್ರ ಅಂದರೆ ಏನು?

ಒಬ್ಬ ವ್ಯಕ್ತಿಯು ಸರ್ಕಾರದಿಂದ ಸಿಗುವ ಪ್ರಯೋಜನಗಳನ್ನು ಪಡೆಯಲು ತನ್ನ ಬಳಿ ಇರುವ ದಾಖಲಾತಿಗಳ ಪ್ರಕಾರ ತನ್ನ ಜಾತಿಯನ್ನು ಕೇಂದ್ರದಲ್ಲಿ ದೃಡೀಕರಿಸಲು ಕಂದಾಯ ಇಲಾಖೆಯ ತಹಸಿಲ್ದಾರರಿಗೆ ಆನಲೈನ್‌ ಮೂಲಕ ಅರ್ಜಿ ಸಲ್ಲಿಸಿ QR Code ಮತ್ತು RD ನಂಬರ್ ಹೊಂದಿರುವ‌ ಪ್ರಮಾಣ ಪತ್ರವನ್ನು ಪಡೆಯುವುದಾಗಿದೆ.

What are the benefits of OBC certificate ?
OBC ಪ್ರಮಾಣ ಪತ್ರದಿಂದಾಗುವ ಉಪಯೋಗಗಳು ಏನು?

  • ಬ್ಯಾಂಕುಗಳಲ್ಲಿ ಈ ಪ್ರಮಾಣ ಪತ್ರ ಉಪಯೋಗವಾಗಬಹುದು.
  • ಕೆಲವು ಕೇಂದ್ರ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಉಪಯೋಗವಾಗುತ್ತದೆ.
  • ತನ್ನ ಮಕ್ಕಳನ್ನು ಕೇಂದ್ರೀಯ ಶಾಲೆಗಳಿಗೆ ಸೇರಿಸುವಾಗ ಈ ಪ್ರಮಾಣ ಪತ್ರ ಕೇಳಲಾಗುತ್ತದೆ.
  • ಕೆಂದ್ರೀಯ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸುವಾಗ ಉಪಯೋಗವಾಗುತ್ತದೆ.
  • ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ OBC ಪ್ರಮಾಣ ಪತ್ರ ಅವಶ್ಯಕತೆ ಇರುತ್ತದೆ.

ಹೆಚ್ಚಿನ ಮಾಹಿತಿ : ಯಾವುದೇ ರೀತಿಯ ಹಣವನ್ನು ಹೂಡಿಕೆ ಮಾಡದೇ ಮನೆಯಲ್ಲಿಯೇ ಕೂತು ತಮ್ಮ ಮೊಬೈಲ್‌ ಮೂಲಕ ಪಾರ್ಟ್‌ ಟೈಮ್‌ ಕೆಲಸಗಳನ್ನು ಮಾಡಲು ಈ ಲಿಂಕನ್ನು ಕ್ಲಿಕ್‌ ಮಾಡಿ.

Which documents are required for Cast certificate ?
ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?

  • ಆಧಾರ ಕಾರ್ಡ್
  • ಟಿ.ಸಿ ಅಥವಾ ಶಾಲಾ ದಾಖಲಾತಿ ಪ್ರಮಾಣ ಪತ್ರ
  • ಪಡಿತರ ಚೀಟಿ
  • ಮತದಾರರ ಗುರುತಿನ ಚೀಟಿ
  • ಸ್ವಯಂಘೋಷಣಾ ಪತ್ರ (100rs ಬಾಂಡ್‌ ಮೇಲೆ ಬರೆಯಬೇಕು)(Format)
  • Payment Slip (Optional)
  • ಜಾತಿ ಪ್ರಮಾಣ ಪತ್ರ
  • ಪಂಚನಾಮೆ (Format)

ಗಮನಿಸಿ : ದಾಖಲೆಗಳನ್ನು ತಮ್ಮ ವಿಳಾಸಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದಂತೆ ನೀಡಬೇಕು.

ಪ್ರಮಾಣ ಪತ್ರ ವಿತರಿಸಲು ಬೇಕಾಗುವ ಗರಿಷ್ಟ ಸಮಯಗಳು : 21 ಸರ್ಕಾರಿ ಕೆಲಸದ ದಿನಗಳು

ಹೆಚ್ಚಿನ ಮಾಹಿತಿ : ಉದ್ಯೋಗ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅರ್ಜಿಯ ಪ್ರಕ್ರಿಯೆಗಳು:

  • ಅರ್ಜಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಬೇಕು
  • ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅರ್ಜಿ ಸಲ್ಲಿಸಿದ ನಂತರ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡುವುದು ಉತ್ತಮವಾಗಿರುತ್ತದೆ.
  • ನಂತರ ಸಂಬಂಧಪಟ್ಟ ಅಧಿಕಾರಿಗಳು ಈ ಅರ್ಜಿಯನ್ನು ಪರಿಶಿಲಿಸಿ ಆನ್‌ಲೈನ್‌ ಮೂಲಕ ಅನುಮೋದಿಸುವರು.
  • ನಂತರ ಪ್ರಮಾಣಪತ್ರವನ್ನು ಆನ್‌ಲೈನ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಅರ್ಜಿಸಲ್ಲಿಸುವ ಲಿಂಕ್‌ : ಲಿಂಕ್‌ – 1 , ಲಿಂಕ್‌ – 2 , ಲಿಂಕ್‌ – 3

ಅರ್ಜಿ ಸಲ್ಲಿಸುವ ವಿಧಾನ