ಹಿಂದುಳಿದ ವರ್ಗಗಳ ಪ್ರವರ್ಗ- 3ಬಿ ಗೆ ಸೇರಿದ ನಿರುದ್ಯೋಗಿಗಳಿಗೆ ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಕೈಗಾರಿಕ ಸಾರಿಗೆ ಮತ್ತು ಸೇವಾ ವಲಯದಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸಾಲ / ಸಹಾಯಧನದ ನೆರವು ನೀಡುವುದಾಗಿದೆ.
ಯೋಜನೆಯಲ್ಲಿ ಪ್ರಯೋಜನ ಪಡೆಯಲು ಇರಬೇಕಾದ ಅರ್ಹತೆಗಳು:
1. ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಅಭ್ಯರ್ಥಿಯು ಹಿಂದುಳಿದ ವರ್ಗಗಳ ಪ್ರವರ್ಗ- 3ಬಿ ಸಮುದಾಯಗಳಿಗೆ ಸೇರಿದವರಾಗಿರಬೇಕು. 2. ಈ ಯೋಜನೆಯಲ್ಲಿ ಆರ್ಥಿಕ ಸಹಾಯಧನ ವಡೆಯಲು ಇಚ್ಛಿಸುವ ಅರ್ಜಿದಾರರು. ಉದ್ಯಮ/ಉದ್ದೇಶಕ್ಕೆ ಸಂಬಂಧಪಟ್ಟ, ಪ್ರಾಧಿಕಾರಗಳಾದ ಗ್ರಾಮ ಕೈಗೊಳ್ಳುವ ಪಂಚಾಯತ್/ಪಟ್ಟಣ ಪಂಚಾಯತ್/ಪುರಸಭೆ/ನಗರಸಭೆ/ನಗರ ಅವಶ್ಯಕ ಉದ್ಯಮ ಪರವಾನಗಿಯನ್ನುಪಡೆದಿರಬೇಕು.ಪಾಲಿಕೆ ಇವರಿಂದ ಅವಶ್ಯಕ ಉದ್ದಿಮೆ ಪರವಾನಗಿಯನ್ನು ಪಡೆದಿರಬೇಕು. 3. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.98,000/-ಗಳು ನಗರ ವುದೇಶದವರಿಗೆ ರೂ.1,20,000/-ಗಳನ್ನು ಮೀರಿರಬಾರದು. 4. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. 5. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 55 ಅರ್ಜಿದಾರರ ವರ್ಷಗಳ ಮಿತಿಯೊಳಗಿರಬೇಕು. 6. ಈ ಹಿಂದೆ ನಿಗಮದ ಯೋಜನೆಗಳಲ್ಲಿ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಈ ಉದ್ದೇಶಕ್ಕೆ ಯಾವುದೇ ಯೋಜನೆಗಳಿಂದ ಸೌಲಭ್ಯ ಪಡೆದಿರಬಾರದು, 7. ಈ ಯೋಜನೆಯಲ್ಲಿ ಸವಲತ್ತು ಪಡೆಯಬಯಸುವ ಅರ್ಜಿದಾರರು ವಾಸಿಸುತ್ತಿರುವ ವ್ಯಾಪ್ತಿಗೆ ಬರುವ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯಲ್ಲಿ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆ ಹೊಂದಿರಬೇಕು. 8. ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು. 9.ಈ ಯೋಜನೆಯಲ್ಲಿ ಮಹಿಳೆಯರಿಗೆ ಶೇ.33ರನ್ನು ಮೀಸಲು ನಿಗಧಿಪಡಿಸಿದ. 10.ಈ ಯೋಜನೆಯಲ್ಲಿ ಅಂಗವಿಕಲರಿಗೆ ಶೇ.5 ರಮ್ಯ ಮೀಸಲು ನಿಗಧಿಪಡಿಸಿದೆ. 11.ಮಂಗಳಮುಖಿಯರಿಗೆ ಶೇ.1ರಷ್ಟು ಮೀಸಲು ನಿಗಧಿಪಡಿಸಿದೆ. 12. ಅಭ್ಯರ್ಥಿಯು ಕೈಗೊಳ್ಳುವ ಉದ್ದಿಮೆ/ಆರ್ಥಿಕ ಚಟುವಟಿಯ ಬಗ್ಗೆ ತರಬೇತಿ/ ಅನುಭವ/ತಿಳುವಳಿಕೆ ಹೊಂದಿರಬೇಕು. 13. ಸದರಿ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಗಳು ಉದ್ದೇಶಿತ ಘಟಕವನ್ನು 7ನೇ ಜುಲೈ 2023ರ ನಂತರ ಹೊಸದಾಗಿ ಪ್ರಾರಂಭಿಸುವವರು ಮಾತ್ರ ಅರ್ಹರಾಗಿರುತ್ತಾರೆ. 14. ಅರ್ಜಿದಾರರು ನಿರುದ್ಯೋಗಿಯಾಗಿರಬೇಕು (ಸ್ವಯಂ ಘೋಷಿತ ಪುಮಾಣ ಪತ್ರ ಸಲ್ಲಿಸುವುದು). |
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:-
1. ಜಾತಿ ಕುಟುಂಬದ ವಾರ್ಷಿಕ ಆದಾಯ ಪುಮಾಣ ಪತ್ರ. 2. ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ/ ಪಡಿತರ ಚೀಟಿ. 3. ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ. 4. ಹೊಸದಾಗಿ ಸ್ವಯಂ ಉದ್ಯೋಗ / ಉದ್ಯಮ ಘಟಕಗಳಗಳನ್ನು ಸ್ಥಾಪಿಸಿದ ಮೂರು ತಿಂಗಳೊಳಗೆ ಗ್ರಾಮ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳಿಂದ ಉದ್ದಿಮೆ ಪರವಾನಗಿ ಪಡೆದು ಸಲ್ಲಿಸುವುದು, |
ಘಟಕ ವೆಚ್ಚ / ಸಹಾಯಧನ:
ಸ್ವಯಂ ಉದ್ಯೋಗ ಯೋಜನೆಯಡಿ ಹೊಸ ಉದ್ದಿಮೆ/ವ್ಯಾಪಾರ ಕೈಗೊಳ್ಳಲು ಅರ್ಜಿದಾರರಿಗೆ ರಾಷ್ಟ್ರೀಕೃತ ಬ್ಯಾಂಕ್/ವಾಣಿಜ್ಯ ಬ್ಯಾಂಕ್ಗಳಿಂದ ಮಂಜೂರು ಮಾಡುವ ಸಾಲದ ಮೊತ್ತಕ್ಕೆ (ಘಟಕ ಶೇ.20ರಷ್ಟು ಅಥವಾ ಗರಿಷ್ಠ ರೂ.1.00 ಲಕ್ಷಗಳವರೆಗೆ ನಿಗಮದಿಂದ ಸಹಾಯಧನ ಮಂಜೂರು ಮಾಡುವುದು. ಬ್ಯಾಂಕುಗಳಿಂದ ವಡೆಯುವ ಸಾಲ, ಬ್ಯಾಂಕುಗಳು ನಿಗಧಿಪಡಿಸುವ ಚಾಲ್ತಿ ಬಡ್ತಿಯೊಂದಿಗೆ ಸಾಲದ ಮೊತ್ತವನ್ನು ನಿಗದಿತ ಕಂತುಗಳಲ್ಲಿ ಮರು ಪಾವತಿಸಬೇಕು |
ಅರ್ಜಿ ಸಲ್ಲಿಸಲು ಸಂಪರ್ಕ ವಿಳಾಸ
ಅರ್ಜಿ ಸಲ್ಲಿಸಲು ಗ್ರಾಮ್ ಒನ್, ಕರ್ನಾಟಕ ಒನ್, ಸಿ ಎಸ್ ಸಿ ಕೇಂದ್ರಗಳಿಗೆ ಭೇಟಿಮಾಡಿ ಅರ್ಜಿ ಸಲ್ಲಿಸಬಹುದು. | |