ಈ ಯೋಜನೆಯಲ್ಲಿ  ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರವರ್ಗ-1 ಮತ್ತು 2ಎ ಗೆ ಶೇ.85 ರಷ್ಟು ಪ್ರವರ್ಗ-3ಎ ಮತ್ತು 3ಬಿ ಗೆ ಶೇ.15ರಷ್ಟು ಮೀಸಲಾತಿ ನಿಗಧಿಪಡಿಸಿದೆ. ಇನ್ನುಳಿದನಿಗಮಗಳಲ್ಲಿ ಆಯಾ ನಿಗಮದ ವ್ಯಾಪ್ತಿಗೆ ಬರುವ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡತಕ್ಕದ್ದು.

ಯೋಜನೆಯಲ್ಲಿ ಪ್ರಯೋಜನ ಪಡೆಯಲು ಇರಬೇಕಾದ ಅರ್ಹತೆಗಳು:

1. ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಅಭ್ಯರ್ಥಿಯು ಹಿಂದುಳಿದ ವರ್ಗಗಳ ಪ್ರವರ್ಗ 3ಬಿ ಸಮುದಾಯಗಳಿಗೆ ಸೇರಿದವರಾಗಿರಬೇಕು.
2. ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘು ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು
3. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.98000/-ಗಳು ನಗರ ಪ್ರದೇಶದವರಿಗೆ ರೂ. 120000/-ಗಳನ್ನು ಮೀರಿರಬಾರದು.
4. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
5. ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷಗಳು ಹಾಗೂ ಗರಿಷ್ಠ 45 ವರ್ಷಗಳ ಮಿತಿಯೊಳಗಿರಬೇಕು.
6. ಈ ಹಿಂದೆ ನಿಗಮದ ಯೋಜನೆಗಳಲ್ಲಿ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಈ ಉದ್ದೇಶಕ್ಕೆ ಯಾವುದೇ ಯೋಜನೆಗಳಿಂದ ಸೌಲಭ್ಯ ಪಡೆದಿರಬಾರದು.
7. ಈ ಯೋಜನೆಯಲ್ಲಿ ಸವಲತ್ತು ಪಡೆಯಬಯಸುವ ಅರ್ಜಿದಾರರು ವಾಸಿಸುತ್ತಿರುವ ವ್ಯಾಪ್ತಿಗೆ ಬರುವ ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಯಲ್ಲಿ ಸರ್ಕಾರದ ಸೌಲಭ್ಯ ಪಡೆಯುವ ಆಧಾರ್‌ ಸಂಯೋಜಿತ ಬ್ಯಾಂಕ್‌ ಖಾತೆ ಹೊಂದಿರಬೇಕು.
8. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಸೌಲಭ್ಯ ಪಡೆಯತಕ್ಕದ್ದು.
9. ಈ ಯೋಜನೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡುವುದು.
10.ಈ ಯೋಜನೆಯಲ್ಲಿ ಮಂಗಳಮುಖಿಯರಿಗೂ ಸಹ ಆದ್ಯತೆ ನೀಡುವುದು.
11.ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಯು ಸ್ವಯಂ ಟ್ಯಾಕ್ಸಿ ಚಾಲನೆ (Yellow Board) ಉದ್ದೇಶಕ್ಕೆ ವಾಹನವನ್ನು ನೋಂದಾಯಿಸತಕ್ಕದ್ದು.

ಸಹಾಯಧನದ ಮೊತ್ತ:

 ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನವನ್ನು ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್‌/ಗ್ರಾಮೀಣ ಬ್ಯಾಂಕ್‌ಗಳು ಮಂಜೂರು ಮಾಡಿದ ಸಾಲಕ್ಕೆ ಶೇ.50ರಷ್ಟು ಅಥವಾ ಗರಿಷ್ಠ ರೂ.3.00 ಲಕ್ಷಗಳವರೆಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಬ್ಯಾಂಕ್‌ ಪಾಲಿನ ಸಾಲಕ್ಕೆ ಬ್ಯಾಂಕ್‌ ನಿಗಧಿಪಡಿಸುವ ಚಾಲ್ತಿ ದರದ ಬಡ್ಡಿಯೊಂದಿಗೆ ಸಾಲದ ಮೊತ್ತವನ್ನು ನಿಗದಿತ ಕಂತುಗಳಲ್ಲಿ ಮರು ಪಾವತಿಸಬೇಕು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಅರ್ಜಿದಾರರು ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ ಈ ಕೆಳಕಂಡ ಅಗತ್ಯ ದಾಖಲೆಗಳನ್ನು ಸಲ್ಲಿಸತಕ್ಕದ್ದು.
1. ಅರ್ಜಿದಾರರು ಹಿಂದುಳಿದ ವರ್ಗಗಳಿಗೆ ಸೇರಿರಬೇಕು ಹಾಗೂ ಸಂಬಂಧಿಸಿದ ತಾಲ್ಲೂಕು ತಹಶೀಲ್ದಾರರು/ಕಂದಾಯ ಅಧಿಕಾರಿಗಳಿಂದ ನಿಗಧಿತ ನಮೂನೆಯಲ್ಲಿ ಪಡೆದ ಜಾತಿ/ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.
2. ಅರ್ಜಿದಾರರ ವಾಸದ ಪುರಾವೆಗಾಗಿ ಸಕ್ಷಮ ಪ್ರಾಧಿಕಾರಗಳು ನೀಡಿದ ಆಧಾರ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಪಡಿತರ ಚೀಟಿ.
3. ಲಘು ವಾಹನ ಚಾಲನಾ ಪರವಾನಗಿಯ ದೃಢೀಕೃತ ಪ್ರತಿ.
4. ಅರ್ಜಿದಾರರ ಪಾಸ್‌ ಪೋರ್ಟ್‌ ಅಳತೆಯ ಇತ್ತೀಚಿನ ಭಾವಚಿತ್ರ.
5. ಅರ್ಜಿದಾರರು ನಿರುದ್ಯೋಗಿ ಆಗಿರಬೇಕು. (ಸ್ವಯಂ ಘೋಷಣಾ ಪತ್ರ ಸಲ್ಲಿಸುವುದು).

ಅರ್ಜಿ ಸಲ್ಲಿಸಲು ಸಂಪರ್ಕ ವಿಳಾಸ:

ಅರ್ಜಿ ಸಲ್ಲಿಸಲು ಗ್ರಾಮ ಒನ್‌, ಕರ್ನಾಟಕ ಒನ್‌, ಸಿ ಎಸ್‌ ಸಿ ಕೇಂದ್ರಗಳಿಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.